ನೂರು ನೂರಾರು ಮಾತು
ನೂರು ನೂರಾರು ನೆನಪು
ಆಕಾಶ ವಿಸ್ತಾರ ಕೊನೆಯಿಲ್ಲದ ಸೀಮೆ
ಕೊನೆಯಿಲ್ಲದ ಸವಿನೆನಪು !
ಎದೆಯಲಿ ತಲ್ಲಣ ಮೂಡಿದೆ
ಕಂಗಳು ಮೆಲ್ಲನೆ ನೆನೆದಿವೆ
ಕಳೆದ ನಲ್ಮೆಯ ಕ್ಷಣಗಳು
ಕುಶಲ ನೋವನು ಕೆರಳಿವೆ
ಸವಿಸುವೆಯಾ ಕಡು ಜೇನು?
ಕೊನೆಯಿಲ್ಲದ ಸವಿನೆನಪು!
ಅಸಂಖ್ಯ ಪುಟಗಳ ತೆರೆಯಲು
ಹೊಸ ಆಯಾಮವ ಕಂಡೆ ನಾ
ನನ್ನ ಬಾಳ ಕಥೆಯನು
ಹೊಸ ತಿರುವಿಗೆ ತಂದೆ ನಾ
ಶುರುವಾಯಿತು ಹೊಸ ಸಂಗ್ರಹ
"ಕೊನೆಯಿಲ್ಲದ ಸವಿನೆನಪು"